-
ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS
- 2022/07/14
- 再生時間: 1 時間 7 分
- ポッドキャスト
-
サマリー
あらすじ・解説
ಕರ್ನಾಟಕದ ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬೆಂಗಳೂರಿನ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಟಿಸಿ ಮತ್ತು ಬಿಡಿಎಯಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಹೇಗೆ ವಿಕಸನಗೊಂಡಿವೆ, ಅವು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಅವುಗಳನ್ನು ಹೇಗೆ ಮರುರೂಪಿಸಬೇಕಾಗಿದೆ ಎಂಬುದರ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ನಗರ ಆಡಳಿತ ಸಂಶೋಧಕ ಡಾ ಸುಧೀರ ಎಚ್‌ಎಸ್ ಮಾತನಾಡುತ್ತಾರೆ. Urban Governance researcher Dr Sudhira HS talks to host Pavan Srinath about how various government agencies like Karnataka’s KPTCL, BESCOM and Bengaluru’s BWSSB, BMTC and BDA have evolved – how they are functioning and how they need to be reimagined for good urban governance. He unpacks the plethora of PSUs, Parastatal agencies, SPVs and Boards that have taken over significant aspects of local government.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ಬೆಂಗಳೂರಿನಂತಹ ಮಹಾನಗರವು ಹಲವಾರು ಸರ್ಕಾರಿ ಸಂಬಂಧಿತ ಸಂಸ್ಥೆಗಳನ್ನು ಹೊಂದಿದೆ, ಅದು ಅಗತ್ಯ ಸೇವೆಗಳನ್ನು ಅಥವಾ ನಿವಾಸಿಗಳ ದೈನಂದಿನ ಜೀವನಕ್ಕೆ ಮುಖ್ಯವಾದ ಆಡಳಿತವನ್ನು ಮಾಡುತ್ತದೆ. ಕೆಲವನ್ನು ಹೆಸರಿಸೋದಾದ್ರೆ, ಬೆಂಗಳೂರಿನಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ಪೈಪ್‌ಲೈನ್ ನೀರು ಸರಬರಾಜು ಮತ್ತು ಒಳಚರಂಡಿಯನ್ನು ನಿರ್ವಹಿಸುತ್ತದೆ, ಬೆಸ್ಕಾಂ ವಿದ್ಯುತ್ ಸಂಭಂದಿತ ಕೆಲಸಗಳನ್ನ ನೋಡಿಕೊಳ್ಳುತ್ತೆ, ಬಿ.ಎಂ.ಟಿ.ಸಿ ಸಾರ್ವಜನಿಕ ಬಸ್‌ಗಳನ್ನು ನಿರ್ವಹಿಸುತ್ತದೆ, ಬಿ.ಎಂ.ಆರ್.ಸಿ.ಎಲ್ ನಗರ ಮೆಟ್ರೋ ರೈಲನ್ನು ನಿರ್ವಹಿಸುತ್ತದೆ. ಅದೇ ರೀತಿ, ರಾಜ್ಯದಾದ್ಯಂತ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಅನೇಕ ಸಂಸ್ಥೆಗಳಿವೆ. ಬಹುತೇಕ ಎಲ್ಲವೂ ಸ್ಥಳೀಯವಾಗಿ ಚುನಾಯಿತ ಸರ್ಕಾರಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಮತ್ತು ಸಾರ್ವಜನಿಕ ಉದ್ದೇಶಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.ಈ ಸಾರ್ವಜನಿಕ ಏಜೆನ್ಸಿಗಳ ಅವ್ಯವಸ್ಥೆಗಳ ಕುರಿತು ವಿವರಿಸಲು ಸುಧೀರ ಎಚ್‌ಎಸ್ ರವರು ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್‌ನ 144 ನೇ ಸಂಚಿಕೆಯಲ್ಲಿ ನಮ್ಮ ಜೊತೆ ಸೇರಿಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ವಿದ್ಯುತ್ ಸಂಸ್ಥೆಗಳ ವಿಕಸದ ಕುರಿತು ಮಾತನಾಡುತ್ತಾರೆ ಜೊತೆಗೆ ಸರ್ಕಾರಿ ಸಂಸ್ಥೆಗಳು ವಾಸ್ತವದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಹಾಗೆಯೇ ಎಲ್ಲಿ ಮತ್ತು ಹೇಗೆ ವಿಫಲಗೊಳ್ಳುತ್ತವೆ ಎಂಬುವುದನ್ನೂ ವಿವರಿಸುತ್ತಾರೆ. ಅವರು ಕಾರ್ಪೊರೇಟೀಕರಣದ ಮಿತಿಗಳನ್ನು ಮತ್ತು ಆಡಳಿತದಲ್ಲಿ ಅದರ ಪಾತ್ರದ ಕುರಿತು ವಿವರಿಸುತ್ತಾ ಮಾರುಕಟ್ಟೆ ಕಾರ್ಯವಿಧಾನಗಳು ಎಲ್ಲಿ ಉತ್ತಮವಾಗಿ ಅನ್ವಯಿಸಬಹುದು ಮತ್ತು ಎಲ್ಲಿ ವಿಫಲವಾಗಬಹುದು ಎಂದು ಮಾತನಾಡಿದ್ದಾರೆ.ಡಾ ಸುಧೀರ ಎಚ್‌ಎಸ್ ಅವರು ಗುಬ್ಬಿ ಲ್ಯಾಬ್ಸ್‌ನ ನಿರ್ದೇಶಕರಾಗಿದ್ದಾರೆ, ಇದು ಕರ್ನಾಟಕದ ತುಮಕೂರು ಬಳಿಯ ಗುಬ್ಬಿ ಮೂಲದ ಸಂಶೋಧನಾ ಸಂಸ್ಥೆಯಾಗಿದೆ. ಗುಬ್ಬಿ ಲ್ಯಾಬ್ಸ್ ಮ್ಯಾಪಿಂಗ್, ನಗರ ...